English   ಕನ್ನಡ

ಕನಕಗಿರಿ ಪಟ್ಟಣದ ಇತಿಹಾಸ


ಕನಕಗಿರಿ ಭಾರತದ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಸ್ಮರಣೀಯವಾದದು. ದಕ್ಷಿಣದಿಂದ ದಂಡೆತ್ತಿ ಬರುತ್ತಿದ್ದ ಮುಸ್ಲಿಮರ ದಾಳಿಂದ ತತ್ತರಿಸಿದ್ದ ಹಿಂದೂ ಧರ್ಮದ ಪುನರುತ್ಥಾನಕ್ಕೆ ನಾಂದಿ ಹಾಡಿತಲ್ಲದೆ ಎರಡು ಶತಮಾನಗಳಿಗೂ ಹೆಚ್ಚು ಕಾಲ ಸಾಮ್ರಾಜ್ಯವಾಳಿ `ಸುವರ್ಣಯುಗ'ವೆಂದು ಕರೆಸಿಕೊಂಡ ಕೀರ್ತಿ ವಿಜಯನಗರಕ್ಕೆ ಸಲ್ಲುತ್ತದೆ. ಇಂಥ ಮಹತ್ವದ ಯುಗದಲ್ಲಿ ಬೆಳಕಿಗೆ ಬಂದ ಶಿಲ್ಪ ಸಂಪತ್ತಿನ ಕಲಾ ಕಣಜ ಕನಕಗಿರಿ. "ನಡೆದು ನೋಡಲು ಹೋಗು ಹಂಪಿ ಸಿರಿ ಮನತಣಿದು ನೋಡಲು ಬಾ ಕನಕಗಿರಿ" ಎಂಬ ಕವಿಯ ಸಾಲುಗಳು ಅಕ್ಷರಶ: ಸತ್ಯ ಎಂದು ಕನಕಗಿರಿಯನ್ನು ನೋಡಿದ ಹೃದಯವಂತ ಪ್ರವಾಸಿಗರಿಗೆ ಅನಿಸದೆ ಇರದು. ಕನಕಗಿರಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿಗೆ ಸೇರಿದ ಒಂದು ಐತಿಹಾಸಿಕ ಪ್ರವಾಸಿ ತಾಣ. ಜಿಲ್ಲಾ ಕೇಂದ್ರ ಸ್ಥಾನದಿಂದ ೪೮ ಕಿ.ಮಿ, ತಾಲೂಕು ಕೇಂದ್ರ ಸ್ಥಾನದಿಂದ ೨೨ ಕಿ.ಮಿ ಹಾಗೂ ಜಗತ್ಪ್ರಸಿದ್ದ ಹಂಪೆಂದ ೨೦ ಮೈಲಿಗಳ ದೂರದಲ್ಲಿ ಶಿಲ್ಪ ಸಂದೌರ್ಯದ ಈ ರಮ್ಯ ತಾಣವಿದೆ. ಕನಕಗಿರಿ ಹೆಸರಿನ ಹಿಂದಿನ ಮರ್ಮ: ದಂತಕಥೆಗಳಲ್ಲಿ ಹೆಸರಿಸಲಾದ ವಾರಾಣವಾತಿ ಎಂಬ ಹೆಸರಿನ ಈ ಪ್ರದೇಶದವು ಪುಷ್ಪ ಮತ್ತು ಜಯಂತಿ ಎಂಬ ನದಿಗಳೆರಡರ ಸಂಗಮದ ತಾಣವಾಗಿತ್ತು ಮತ್ತು ಈ ಪ್ರದೇಶವು ದಟ್ಟವಾದ ಕಾಡಿನಿಂದ ಆವೃತ್ತಗೊಂಡಿತ್ತು. ಇಲ್ಲಿ ಜಯಂತ ನರಸಿಂಹ ಎಂಬ ದೇವರು ನೆಲೆಸಿದ್ದನು. ಈ ನದಿ ತಟದಲ್ಲಿ ಇಪ್ಪತ್ತ ನಾಲ್ಕು ಜನ ಬೌದ್ಧ ಮುನಿಗಳಲ್ಲಿ ಒಬ್ಬರಾಗಿದ್ದರೆನ್ನಲಾದ `ಕನಕಮುನಿ'ಇಲ್ಲಿ ತಪಸ್ಸು ಗೈದು ಕೆಲ ಕ್ಷಣ ಕನಕವೃಷ್ಟಿ ಅಂದರೆ ಚಿನ್ನದ ಮಳೆ ತರಿಸಿದ ಈ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಕನಕಗಿರಿ ಎಂದು ಕರೆಯಲಾತು ಎಂದು ಹೇಳಲಾಗುತ್ತಿದೆ. ಸ್ಕಂದ ಪುರಾಣದ ತುಂಗ ಮಹಾತ್ಮೆಯಲ್ಲಿ ಈ ಸ್ಥಳದ ಮಹಿಮೆಯನ್ನು ಹಾಗೂ ದೇವರ ಚರಿತೆಯನ್ನು ವರ್ಣಿಸಲಾಗಿದೆ ಅಲ್ಲದೆ ಈ ಪುರಾಣದಲ್ಲಿ ಕನಕಗಿರಿಯನ್ನು `ಸುವರ್ಣಗಿರಿ' ಎಂದು ಕರೆಯಲಾಗಿದೆ. ಹಂಪೆಂದ ೨೦ ಮೈಲುಗಳ ದೂರದಲ್ಲಿ `ಸುವರ್ಣಗಿರಿ' ಅಂದರೆ ಕನಕಗಿರಿ ಇರುವುದಾಗಿ ಹೇಳಿದ್ದು ಅಲ್ಲಿ ಹೇಳಲಾಗಿರುವ ಭೌಗೋಳಿಕ ಅಂಶಗಳೆಲ್ಲ ಸತ್ಯವಾಗಿವೆ. ಕನಕಗಿರಿ ಹಾಗೂ ಇಲ್ಲಿರುವ ಇತಿಹಾಸಿದ ಕುರಿತು ಹಲವಾರು ಇತಿಹಾಸ ತಜ್ಷರು ರೋಚಕದ ಅಂಶಗಳನ್ನು ಹೊರಗೆಡಿಹಿದ್ದಾರೆ. ಶಾಸನಗಳಿಂದ ಸಂಗ್ರಹಿಸಲ್ಪಟ್ಟ ಹಲವು ವಿಷಯಗಳು ಕನಕಗಿಯ ಇತಿಹಾಸವನ್ನು ಹೇಳುತ್ತಿವೆ. ಕ್ರಿಸ್ತಯುಗದ ಪ್ರಾರಂಭದಲ್ಲಿ ಟಾಲೆವಿಯನೆಂಬ ವಿದೇಶಿಯನು ತನ್ನ ಪ್ರವಾಸಕಥನದಲ್ಲಿ `ಕಲಿಗೇರಿಯಸ್' (ಕನಕಗಿರಿ) ಮತ್ತು `ಮೊದಗಾಲ್' (ಮುದಗಲ್) ವ್ಯಾಪಾರದ ಕೇಂದ್ರಗಳಾಗಿದ್ದವು ಎಂದು ಹೇಳಿದ್ದಾನೆ.

ಮಾಹಿತಿ: ಗೂಗಲ್, ಅಲ್ಲಾಗಿರಿರಾಜ(ಲೇಖಕಕರು)

ಪತ್ರಕರ್ತ ವೃಂದ

ಕನಕಗಿರಿ ವಿಧಾನಸಭಾ ಕ್ಷೇತ್ರ:ಕನಕಗಿರಿಯು 1978ರಲ್ಲಿ ವಿಧಾನಸಭಾ ಕ್ಷೇತ್ರ ಎಂದು ಅಂಗೀಕರಿಸಲಾಯಿತು. ಶ್ರೀ ಎಂ. ನಾಗಪ್ಪ ಮುಕಪ್ಪ ಮೊದಲ ಬಾರಿಗೆ ಕನಕಗಿರಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ತದನಂತರ ಇವರೆಗೆ ಒಟ್ಟು 9 ಶಾಸಕರು ಕನಕಗಿರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಪ್ರಸ್ತುತ ಶ್ರೀ ಶಿವರಾಜ ತಂಗಡಗಿ ಯವರು 2013ರ ರ ಚುನಾವಣೆಯಲ್ಲಿ ಜಯಿಸಿ ಕನಕಗಿರಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ