English   ಕನ್ನಡ

ಶ್ರೀಕನಕಾಚಲಪತಿ ದೇವಾಲಯ


ಚಿನ್ನದ ಮಳೆಯ ನಂತರದ ವರ್ಷಗಳಲ್ಲಿ ಕಾಲಕ್ರಮೇಣ ಪಕ್ರೃತಿಯ ವಿಕೋಪಕ್ಕೆ ದಟ್ಟವಾದ ಕಾಡಿನ ನದಿ ತಟದಲ್ಲಿದ್ದ ಜಯಂತ ನರಸಿಂಹ ಲಿಂಗಾಕಾರದ ಸಾಲಿಗ್ರಾಮವು ಮಣ್ಣೊಳಗೆ ಹೂತು ಹೋಗಿದ್ದಾಗಿ ಹೇಳಲಾಗುತ್ತಿದೆ. ಅಲ್ಲದೆ ತದ ನಂತರದಲ್ಲಿ ಗುಜ್ಜಲವಂಶದ ಮೊದಲ ದೊರೆ ಪರಸಪ್ಪ ಈ ಪ್ರದೇಶಕ್ಕೆ ಬಂದು ಇಲ್ಲೆ ನೆಲೆಸಿದ್ದನು. ಒಮ್ಮೆ ಹಾಲು ಕೊಡುವ ಹಸುವೊಂದು ಹುತ್ತಕ್ಕೆ ಹಾಲುಗರೆಯುವುದನ್ನು ಕಂಡರು.ಇದರಿಂದ ಆಶ್ಚರ್ಯನಾದ ಪರಸಪ್ಪ ಉಡಚಿನಾಯಕ ಹುತ್ತವನ್ನು ಕೀಳಿಸಿದನು. ಹುತ್ತ ಕೀಳುವ ಹಾಳು ಮೂರ್ಛೆ ಹೋದರು.ಇದರಿಂದ ಚಿಂತಿತನಾಗಿದ್ದ ಪರಸಪ್ಪನಿಗೆ ಕನಸಿನಲ್ಲಿ ಕಾಣಿಸಿಕೊಂಡು ತಿರುಪತಿ ಗಿರಿವಾಸ ಶ್ರೀವೆಂಕಟೇಶ ಕನಕಗಿರಿಯಲ್ಲಿ ಸಾಲಿಗ್ರಾಮ ರೂಪದಲ್ಲಿ ಲಕ್ಷ್ಮೀನರಸಿಂಹನಾಗಿ ತಾನು ನೆಲೆಸಿ ಭಕ್ತರ ಬೇಡಿಕೆ ಈಡೇರಿಸುವುದಾಗಿ ತಿಳಿಸಿ ಇಲ್ಲಿ ದೇವಾಲಯ ನಿರ್ಮಾಣ ಮಾಡಲು ಸೂಚಿದನು. ವಿಜಯನಗರ ಅರಸ ಪ್ರೌಢ ದೇವರಾಯನಿಗೆ ವೆಂಕಟರಮಣನ ದರ್ಶನದ ಕುರಿತು ತಿಳಿಸಿ ಅವರ ಸಹಾಯದಿಂದ ದೇವಾಲಯ ನಿರ್ಮಾಣಕ್ಕೆ ಮುಂದಾಗಿದ್ದು,ಮತ್ತು ಈ ದೇವರನ್ನು ಕನಕರಾಯ ಎನ್ನುವ ಹೆಸರಿನಿಂದ ಕರೆಯಲಾರಂಭಿಸಿದ್ದು ಇತಿಹಾಸದಿಂದ ತಿಳಿದು ಬರುತ್ತದೆ.ಸರ್ವ ಜಾತಿ, ಧರ್ಮವನ್ನು ತೊಡೆದು ಸರ್ವರಿಗೂ ದರ್ಶನಕ್ಕೆ ಮುಕ್ತವಾಗಿರುವ ಕನಕಗಿರಿಯನ್ನು ಎರಡನೆ ತಿರುಪತಿ ಎಂದು ಕರೆಯಲಾಗುತ್ತಿದೆ.

ವಿಜಯನಗರ ಸಮಕಾಲಿನ ಶಿಲ್ಪಶೈಲಿಯು ವಿಜಯನಗರ ಸಮನಾಗಿ ಅರಳಿರುವ (ಲಕ್ಷ್ಮೀ ನರಸಿಂಹ) ಕನಕಾಚಲ ಲಕ್ಷ್ಮೀ ನರಸಿಂಹ ದೇವಾಲಯದ ಹೊರ ಪ್ರಕಾಅರದಲ್ಲಿ 208 * 90 ಅಡಿಗಳಾಗಿದ್ದು ಏಕಕಾಲಕ್ಕೆ ಸುಮಾರು ಹತ್ತು ಸಾವಿರಕ್ಕಿಂತ ಹೆಚ್ಚು ಜನರು ದೇವಲಾಯದಲ್ಲಿ ಕುಳಿತುಕೊಳ್ಳುವಷ್ಟು ಸ್ಥಳ ಹೊಂದಿದೆ. ಮದ್ಯರಂಗವು ಅದ್ಭುತ ಮಾದರಿಯ ಶಿಲ್ಪಕಲೆಗಳಿಂದ ನಿರ್ಮಿಸಲಾಗಿದೆ. 54 ಅಡಿಗಳ ಉದ್ದ 36 ಅಡಿಗಳ ಅಗಲವಾಗಿರುವ ಮಧ್ಯರಂಗವು ಯಾವುದೇ ಆಧರವಿಲ್ಲದೆ ಸಿಂಹ ಮುಖವುಳ್ಳ ಸ್ಥಂಭ(ಕಂಬ)ಗಳ ಮೇಲೆ ನಿಲ್ಲಿಸಲಾಗಿದೆ. ಗುಡಿ ಮುಂಭಾಗದಲ್ಲಿರುವ ಕಲ್ಲು ಕಂಬ ನೆಲದಲ್ಲಿ ಹುಗಿರಿವುದನ್ನು ಬಿಟ್ಟರೆ ಮೇಲಿರುವ 36ಅಡಿ ಎತ್ತರದ ಏಕಶಿಲೆಯಾಗಿದೆ.

ಶ್ರೀಕನಕಾಚಲಪತಿ ದೇವಾಲಯ ಇಲ್ಲಿರುವ ದೇವಾಲಯಗಳಲ್ಲಿ ಅತ್ಯಂತ ಪ್ರಮುಖ ಮತ್ತು ರಮಣೀಯ, ಅಪೂರ್ವ ಶಿಲ್ಪ ಕಲಾ ಸಂಪತ್ತಿನ ದೇವಾಲಯ. ವಿಜಯ ನಗರ ಅರಸರರಲ್ಲೇ ಶ್ರೇಷ್ಠನಾದ ಶ್ರೀಕೃಷ್ಣದೇವರಾಯನ ಕಾಲವಾದ ೧೫ನೇ ಶತಮಾನದ ಪೂವಾರ್ದದಲ್ಲಿ ಕನಕಗಿರಿಯ ಪಾಳೇಯಗಾರರಾಗಿದ್ದ ಉಡುಚಪ್ಪ ನಾಯಕ ಮತ್ತು ಪರಸಪ್ಪ ಉಡಿಚನಾಯಕರ ಕಾಲದಲ್ಲಿ ಲಕ್ಷೀ ನರಸಿಂಹ ದೇವಾಲಯಗಳು ನಿರ್ಮಾಣಗೊಂಡಿದ್ದು, ಕಲಾ ಸಿರಿಗೆ ಸಾಕ್ಷಿಯಾಗಿದೆ.ಮುಂದಿನ ಪಾಳೇಯಗಾರರು ಈಗಿನ ಸ್ಥಿತಿವರೆಗೂ ಕಟ್ಟಿಸಿರುವರು.

"ಕನಕಗಿರಿಯನ್ನು ಬಡವರ ತಿರುಪತಿ" ಎಂದು ಕರೆಯಲಾಗಿದೆ. ಜಾತ್ರಾ ಮಹೊತ್ಸವದ ಸಮಯದಲ್ಲಿ ತಿರುಪತಿಯಲ್ಲಿರುವಂತೆ ಒಂಬತ್ತು ದಿನಗಳು ಕೂಡ ದಿನಕ್ಕೊಂದರಂತೆ ಪ್ರತಿ ದಿನವು ಒಂದೊಂದು ಉತ್ಸವಗಳು ರಾಜಭೀದಿಯಲ್ಲಿ ಬಂದು ಹೋಗುತ್ತವೆ. ಪುಷ್ಟಾರೋಹಣ, ಸಿಂಹಾರೋಹಣ, ಅಶ್ವಾರೋಹಣ, ಹನುಮಂತೋತ್ಸವ, ಶೇಷೊತ್ಸವ, ಗರುಡೋತ್ಸವ, ಗಜತೋತ್ಸವ, ನಂತರ ದೇವಸ್ಥಾನ ಅದ್ದೂರಿಯಿಂದ ಜರುಗುತ್ತದೆ. ೨೦೮ ಅಡಿ ಉದ್ದ ಹಾಗೂ ೯೦ಅಡಿ ಅಗಲವಿರುವ ದೇವಾಲಯ ವಿಶಾಲವಾಗಿದೆ. ಕನಕಾಚಲ ದೇವರು ಸಾಲಿಗ್ರಾಮ ರೂಪದಲ್ಲಿದ್ದರೆ, ಲಕ್ಷ್ಮೀ ದೇವಾಲಯ ಸುಂದರ ಕೆತ್ತನೆಯಿಂದ ಕೂಡಿದೆ. ಒಳ ಪ್ರಾಕಾರದಲ್ಲಿ ಬ್ರಹ್ಮ, ಕೃಷ್ಣ, ಹನುಮಂತ, ಶಿವ, ಗರುಡ, ಸರಸ್ವತಿ ಮಂದಿರಗಳು, ಪಾಕಶಾಲೆ, ಯಜ್ಞಶಾಲೆ, ಕಲ್ಯಾಣ ಮಂಟಪಗಳು ಇವೆ. ಈ ದೇವಸ್ಥಾನಕ್ಕೆ ಭವ್ಯವಾದ ಮಹಾದ್ವಾರ ಮತ್ತು ಆಕರ್ಷಣೀಯ ಪಂಚ ಗೋಪುರಗಳಿವೆ. ಇಲ್ಲಿನ ಪಂಚ ಕಳಸ ದರ್ಶನದಿಂದ ಮಹಾ ಪಾಪ ವಿನಾಶವಾಗುತ್ತದೆ ಎಂಬ ನಂಬಿಕೆಯಿದೆ.

ದೇವಾಲಯದ ಮದ್ಯ ಭಾಗದಲ್ಲಿ ನಾಟ್ಯ ಶಾಲೆ ಮಹಾ ಮಂಟಪವಿದ್ದು ೩೪ ಕಂಬಗಳ ಮೇಲೆ ನಿಂತಿದೆ. ಇಲ್ಲಿರುವ ಕಂಬಗಳಲ್ಲಿ ದಶಾವತಾರದ ಕೆತ್ತನೆಗಳಿವೆ. ಎರಡು ಭಾಗದಲ್ಲಿ ಇಲ್ಲಿನ ಕಂಬಗಳಿದ್ದು ಹದಿನಾರು ಮುಖಭಾವವಿರುವ ಕಾಲೆತ್ತಿ ನಿಂತಿರುವ ಕುದುರೆಯಾಕಾರದ ಸಿಂಹಾಕಾರದ ಕೆತ್ತನೆಯ ಚಾಚು ಪೀಠಗಳಿವೆ. ಮಂಟಪದಲ್ಲಿ ವಿವಿಧ ಭಂಗಿಯ ಪೌರಾಣಿಕ ಚಿತ್ರಗಳಿವೆ ದ್ರಾವಿಡ ಶ್ಯೆಲಿಯ ಶಿಖರವಿದೆ.

ಮಧ್ಯರಂಗ ಮಂಟಪದ ಮೇಲ್ಭಾಗದಲ್ಲಿ ಉಮಾಮಹೇಶ್ವರರ ವಿವಾಹದ ಹಾಗೂ ಸೀತಾರಾಮ ಕಲ್ಯಾಣ, ಶ್ರೀರಾಮ ಪಟ್ಟಾಭಿಷೇಕದ ಹಾಗೂ ಮತ್ತಿತರ ಅಪರೂಪದ ಮಧ್ಯಕಾಲೀನ ವರ್ಣ ಶಿಲ್ಪಗಳಿವೆ. ನರಸಿಂಹ ದೇವಾಲಯ ಪಕ್ಕದಲ್ಲಿ ಲಕ್ಷಿ ದೇವಾಲಯವಿದೆ, ದೇವಾಲಯ ಸುತ್ತಲೂ ವಿವಿಧ ರಾಮಾಯಣ ಮಹಾಭಾರತ ಕಥೆ ಬಿಂಬಿಸುವ ಪದ್ಮಾಸನದ ಶಿವ,ಹೊರ ಪ್ರಾಂಗಣದಲ್ಲಿ ಉಡಿಚ ನಾಯಕ, ವೆಂಕಟಪ್ಪ ನಾಯಕ, ಕನಕಪ್ಪ ನಾಯಕ, ಇಬ್ಬರು ರಾಣಿಯರ ಶಿಲ್ಪಗಳಿವೆ. ರಾಜವೇಷ ನಿಲುವಂಗಿ ಧರಿಸಿರುವ ರೀತಿ ನೋಡಿದರೆ ಹೃದಯ ತಟ್ಟುತ್ತವೆ. ಕನಕಾಚಲ ದೇವಾಲಯದ ಮುಂದೆ ಗರುಡ ಗುಡಿ ಇದೆ. ಹೊರ ಪ್ರಾಂಗಣದಲ್ಲಿ ಪ್ರದಕ್ಷಿಣಿಪಥವಿದೆ. ಬ್ರಹ್ಮ ,ವಿಷ್ಣು,ಮಹೇಶ್ವರ ಗುಡಿಗಳಿವೆ.

ಮಾಹಿತಿ: ಗೂಗಲ್, ಅಲ್ಲಾಗಿರಿರಾಜ(ಲೇಖಕಕರು)