English   ಕನ್ನಡ

ಇತರ ದೇವಸ್ಥಾಗಳು ಮತ್ತು ಇತಿಹಾಸ


ಗಜ್ಜಲ ವಂಶದ ಕುಟುಂಬದವರು ತಮ್ಮ ಅಸ್ತಿತ್ವ ಉಳಿಸಿಕೊಂಡು ಕಲೆ-ಸಾಹಿತ್ಯ-ಸಂಸ್ಕೃತಿ ಉಳಿಸಿ ಬೆಳಸಿದವರು ಕರ್ನಾಟಕದ ಚರಿತ್ರೆಯಲ್ಲಿ ತಲಕಾಡಿನ ಗಂಗರನ್ನು ಬಿಟ್ಟರೆ ಸುಮಾರು ಐದುನೂರ ವರ್ಷ ಸುದೀರ್ಘ ಕಾಲ ಆಳ್ವಿಕೆ ನಡೆಸಿದ ಏಕೈಕ ರಾಜಮನೆತನವೆಂದರೆ ಕನಕಗಿರಿ ರಾಜಧಾನಿಯ ಗುಜ್ಜಲ ವಂಶದ ನಾಯಕರದು.

ಕನಕಾಚಲ ದೇವಾಲಯದ ಹೊರ ಪ್ರಾಂಗಣದಲ್ಲಿ ಪ್ರದಕ್ಷಿಣಿಪಥವಿದೆ. ಬ್ರಹ್ಮ ,ವಿಷ್ಣು,ಮಹೇಶ್ವರ ಗುಡಿಗಳಿವೆ. ಆಳೆತ್ತರದ ಸುಂದರ ಮೂಲಪ್ರಾಣ ಸಂಜೀವಮೂರ್ತಿ ವಿಗ್ರಹಗಳಿವೆ. ಕನಕಾಚಲಪತಿ ದೇವಸ್ಥಾನದ ಬಲ ಭಾಗದಲ್ಲಿ ಸುಮಾರು ಒಂದು ಕಿ.ಮೀ. ಪಶ್ವಿಮದ ಕಡೆಗೆ ಉದ್ದವಾದ ನೂರಡಿ ಅಗಲ ವಿಸ್ತಾರವಾದ ರಾಜ ಬೀದಿ ಇದೆ. ಇಲ್ಲಿನ ರಾಜಬೀದಿಯ ಎಡ ಮತ್ತು ಬಲ ಬದಿಯಲ್ಲಿ ಅನೇಕ ದೇವಾಲಯಗಳಿವೆ. ಶಿವಲಿಂಗ, ಗಜಲಕ್ಷ್ಮೀ, ಮಹಾಲಕ್ಷ್ಮೀ, ಪಂಪಾವತಿ, ಪೇಟೆಬಸವ,ಎದುರು ಹನುಮಪ್ಪ, ಗಣೇಶ, ಮಹಿಸಾಸುರ ಮರ್ದಿನಿ, ದುರ್ಗಾದೇವಿ, ನಗರೇಶ್ವರ, ಕಾಳಿಕಾದೇವಿ, ತೇರಿನ ಹನುಮಪ್ಪ, ವೀರಭದ್ರೇಶ್ವರ, ಸರಸ್ವತಿ, ಹಿರೇಹಳ್ಳದ ಬಸವೇಶ್ವರ, ಯಲ್ಲಮ್ಮ, ಲಕ್ಷ್ಮೀದೇವಾಲಯ, ಮಲ್ಲಿಕಾರ್ಜುನ, ಪಾಂಡುರಂಗ ದೇವಾಲಯಗಳಿವೆ. ಹಾಗೂ ಅನೇಕ ರಾಜರುಗಳ ಕೆತ್ತನೆಗಳಿವೆ. ವೃತ್ತವಾಗಿರುವ ಕೋಟೆಯು ಮುರು ಪ್ರವೇಶ ದ್ವಾರಗಳನ್ನು (ಅಗಸಿಗಳನ್ನು) ಹೊಂದಿದೆ. ಅಲ್ಲಲ್ಲಿ ಕೊಟೆಯ ಕಾವಲು ಗೋಪುರಗಳಿವೆ. ಇದಲ್ಲದೆ ಅನೇಕ ಸುಂದರ ದೇವಸ್ಥಾನಗಳು, ಗೋಪುರಗಳು, ಮಂಟಪಗಳು ಕಾಣಸಿಗುತ್ತವೆ.

ಇಲ್ಲಿ 701 ದೇವಸ್ಥಾನಗಳು, 701 ಭಾವಿಗಳು, 701 ಗೋಲ್ಲರ ಮನೆಗಳಿದ್ದವೆಂದು ಇತಿಹಾಸದಿಂದ ತಿಳಿಯುತ್ತದೆ. ಇವು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಾಣಗೊಂಡ ದೇವಸ್ಥಾನಗಳಾಗಿವೆ, ಇವುಗಳನ್ನು ಗುಜ್ಜಲವಂಶದ ರಾಜನಾದ ಉಡಚಪ್ಪನಾಯಕನು ಕಟ್ಟಿಸಿದನು. ಕನಕಗಿರಿಯ ದೇವಾಲಯಗಳಲ್ಲಿ ಕಲಾತ್ಮಕ ಶಿಲ್ಪಕಲೆಗಳು; ಭವ್ಯ ಸೌಂದರ್ಯವನ್ನು ಸಾರಿಹೇಳುವ ಸಿಂಹಕಲ್ಲಿ ಕಂಬಗಳು; ಜಕಣಾಚಾರ್ಯ ಅದ್ಭುತ ಕಲಾ ಜಗತ್ತು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ.

ನರಸಿಂಹ ತೀರ್ಥ ಪುಷ್ಕರಣಿ : ವೆಂಕಟಾಪತಿ ಭಾವಯಿಂದ ಮಾರುದೂರದಲ್ಲಿರುವ ಪುಷ್ಕರಣಿಯು ತಿರುಪತಿಯಲ್ಲಿರುವ ಕಲ್ಯಾಣಿ ಪುಷ್ಕರಣಿಯನ್ನು ನೆನಪಿಗೆ ತರುತ್ತದೆ. ಪೂರ್ವದಂತೆ ಪಶ್ಚಿಮ ದಿಕ್ಕಿನಲ್ಲೂ ಮತ್ತೊಂದು ಪುಷ್ಕರಣಿ ಇದ್ದು ಇವು ಉಡಚಿನಾಯಕನ ಮಗನಾದ ಕನಕಯ್ಯ ಉಡಚಿನಾಯಕ ಕಟ್ಟಿಸಿದನೆಂದು ಹೇಳಲಾಗುತ್ತಿದೆ. ಕನಕಾಚಲ ದೇವಸ್ಥಾನದ ಧಾರ್ಮಿಕ ಉತ್ಸವಗಳಿಗಾಗಿ ನರಸಿಂಹ ತೀರ್ಥ ಪುಷ್ಕರಣಿಯನ್ನು ನಿರ್ಮಿಸಲಾಗಿದೆ. ಹಿಂದೆ ಇಲ್ಲಿ ಕನಕಾಚಲನ ತಪೊತ್ಸವ ನಡೆಸಲಾಗುತ್ತಿತ್ತು. ಈ ಪುಷ್ಕರಣಿಯಲ್ಲಿ ಭಕ್ತರು ಸ್ನಾನ ಮಾಡಿದ ನಂತರ ದೇವರ ದರ್ಶನ ಮಾಡುತ್ತಿದ್ದರು.

ಈ ಎರಡು ವಿಶಾಲವಾದ ಪುಷ್ಕರಣಿಗಳ ಸುತ್ತಲೂ ಹಲವು ದೇವಸ್ಥಾನಗಳನ್ನು ನಿರ್ಮಿಸಲಾಗಿದೆ. ಅದೇ ರೀತಿಯಾಗಿ ಈ ಪುಷ್ಕರಣಿಯ ಪಶ್ಚಿಮಕ್ಕೆ ದೊಡ್ಡದಾದ ವೆಂಕಟರಮಣ ದೇವಾಲಯ ಇದೆ. ಇದಕ್ಕೆ ಸೂರ್ಯನಾರಾಯಣ ದೇವಾಲಯ ಎಂಬ ಮತ್ತೂಂದು ಹೆಸರೂ ಇದೆ. ಪುಷ್ಕರಣಿ ಹತ್ತಿರ ಏಳು ಹೆಡೆ ಸರ್ಪದ ಕಲ್ಲಿನ ಮೂರ್ತಿಯು ನೋಡಲು ಸುಂದರವಾಗಿದೆ. ಪುಷ್ಕರಣಿ ಮಧ್ಯೆ ಇರುವ ಮಂಟಪ ನೋಡುಗರನ್ನು ಆಕರ್ಷಿಸುತ್ತದೆ.

ಸುರ್ವಗಿರಿ ಸಂಸ್ಥಾನ ವಿರಕ್ತಮಠ (ಕಲ್ಮಠ), ಕನಕಗಿರಿಯ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ ಮಾಡಿ

ಮಾಹಿತಿ: ಗೂಗಲ್, ಅಲ್ಲಾಗಿರಿರಾಜ(ಲೇಖಕಕರು)