English   ಕನ್ನಡ

ರಥೋತ್ಸವ (ಜಾತ್ರೆ)


ಕನಕಗಿರಿಯ ತೇರು ದಕ್ಷಿಣ ಭಾರತದಲ್ಲಿಯೇ ಅತಿ ಎತ್ತರದ ತೇರು ಎಂಬ ಖ್ಯಾತಿ ಪಡೆದಿದೆ. ಈ ತೇರು ಕೆಲವಡಿ ಉಡಿಚ ನಾಯಕನ ಆಳ್ವಿಕೆ ಕಾಲದಲ್ಲಿ ನಿರ್ಮಾಣವಾಗಿದೆ. 1905ರಲ್ಲಿ ನಿರ್ಮಿಸಲಾದ ಬೃಹತ್ ರಥದಲ್ಲಿ ಮಹಾಭಾರತ, ರಾಮಾಯಣದ ಕಥಾನಕಗಳ ಕೆತ್ತನೆ ಇದೆ. ಪ್ರತಿವರ್ಷ ಫಾಲ್ಗುಣ ಮಾಸದಲ್ಲಿ ಕನಕಾಚಲಪತಿಗೆ ತಿರುಪತಿಯ ವೆಂಕಟೇಶನಿಗೆ ನಡೆಯುವ ರೀತಿಯಲ್ಲೇ ವೈಭವದ ಬ್ರಹ್ಮರಥೋತ್ಸವ ನಡೆಯುತ್ತದೆ. ಕನಕಗಿರಿ ಜಾತ್ರೆಯು ಹೋಳಿ ಹುಣ್ಣಿಮೆಯಾದ 7 ದಿನಗಳ ನಂತರ (ಸಪ್ತಮಿಯಂದು) ವಿಜ್ರಂಭಣೆಯಿಂದ ಜರುಗುತ್ತದೆ. ಹೋಳಿ ಹುಣ್ಣಿಮೆಯ ಒಂದು ದಿನದ ಮುಂಚೆ ಪಟ ಕಟ್ಟುತ್ತದೆ. ನಂತರ ಪ್ರತಿ ದಿನವು ಒಂದೊಂದು ಉತ್ಸವಗಳು ಜರುಗುತ್ತವೆ. ಜಾತ್ರೆಯ ಕಾಲದಲ್ಲಿ ಅಂಕುರಾರ್ಪಣ, ಧ್ವಜಾರೋಹಣ, ಕಲ್ಯಾಣೋತ್ಸವ, ಬಲಿ, ಬ್ರಹ್ಮರಥೋತ್ಸವ, ಶೇಷೋತ್ಸವ, ಗರುಡೋತ್ಸವ, ಉಯ್ಯಾಲೋತ್ಸವ, ಗಜೋತ್ಸವ, ಶಯನೋತ್ಸವ, ವಸಂತೋತ್ಸವ ಮೊದಲಾದ ಧಾರ್ಮಿಕ ವಿಧಿಗಳು ಜರುಗುತ್ತವೆ. ರಾಜ್ಯದ ವಿವಿಧ ಕಡೆಯಿಂದ ಬರುವ ಭಕ್ತರು ನೈವೇದ್ಯ ಮಾಡಿ ತಲೆಮಂಡೆ ನೀಡಿ, ದೀಡ ನಮಸ್ಕಾರ ಹಾಕಿ ಸೇವೆ ಸಲ್ಲಿಸುತ್ತಾರೆ. ಜಾತಿ - ಧರ್ಮ ಭೇದವಿಲ್ಲದೆ ಈ ದೇವಸ್ಥಾನಕ್ಕೆ ಸರ್ವ ದರ್ಮಿಯರು ಭಕ್ತರಿದ್ದಾರೆ

ಮಾಹಿತಿ: ಗೂಗಲ್, ಅಲ್ಲಾಗಿರಿರಾಜ(ಲೇಖಕಕರು), ಮೀಡಿಯಾ, ಪೋಟೊ: ಪಾಮಾಜಿ