English   ಕನ್ನಡ

ಕನಕಗಿರಿಯ ಇತಿಹಾಸ

ಕನಕಗಿರಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿಗೆ ಸೇರಿದ ಒಂದು ಐತಿಹಾಸಿಕ ಪ್ರವಾಸಿ ತಾಣ. ಜಿಲ್ಲಾ ಕೇಂದ್ರ ಸ್ಥಾನದಿಂದ 48 ಕಿ.ಮಿ, ತಾಲೂಕು ಕೇಂದ್ರ ಸ್ಥಾನದಿಂದ 22 ಕಿ.ಮಿ ಹಾಗೂ ಜಗತ್ಪ್ರಸಿದ್ದ ಹಂಪೆಯಿಂದ 20 ಮೈಲಿಗಳ ದೂರದಲ್ಲಿ ಶಿಲ್ಪ ಸಂದೌರ್ಯದ ಈ ರಮ್ಯ ತಾಣವಿದೆ.

ಕನಕಗಿರಿ ಪಟ್ಟಣದ ಇತಿಹಾಸ

ಕನಕಗಿರಿ ಇದು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಒಂದು ಪಟ್ಟಣ 'ಕಣ್ಣಿದ್ದವರಿಗೆ ಕನಕಗಿರಿ-ಕಾಲಿದ್ದವರಿಗೆ ಹಂಪಿ' ಇದು ಈ ಭಾಗದ ಅತ್ಯಂತ ಜನಜನಿತ ನಾಣ್ನುಡಿ. ಕನಕಗಿರಿಯ ಪ್ರಸಿದ್ಧ ಕನಕಾಚಲಪತಿ ದೇವಸ್ಥಾನ, ನರಸಿಂಹಸ್ವಾಮಿ ದೇವಸ್ಥಾನ, ವೆಂಕಟಪ್ಪನ ಬಾವಿ, ಈ ಎಲ್ಲ ದೇವಾಲಯಗಳಲ್ಲಿನ ಶಿಲ್ಪಕಲೆ, ಚಿತ್ರಕಲೆಯನ್ನು ಆಧರಿಸಿಯೇ ಈ ನಾಣ್ನುಡಿ ಜನಪದರಲ್ಲಿ ಹರಿದು ಬಂದಿರುವುದಾಗಿ ಹೇಳಬಹುದಾಗಿದೆ. ಕನಕಮುನಿ ಎಂಬ ಮಹಾ ತಪಸ್ವಿಯ ಪ್ರಭಾವದಿಂದ ಸುವರ್ಣದ (ಬಂಗಾರ/ಕನಕ) ಮಳೆ ಸುರಿಯಿತೆಂದೂ, ಇದಕ್ಕಾಗಿಯೇ, ಈ ಭಾಗಕ್ಕೆ ಕನಕಗಿರಿ ಎಂಬ ಹೆಸರು ಬಂದಿದೆ ಎಂಬ ಐತಿಹ್ಯವಿದೆ.

ಹೆಚ್ಚಿನ ಮಾಹಿತಿ

ಶ್ರೀಕನಕಾಚಲಪತಿ ದೇವಾಲಯ

ಕನಕಗಿರಿಯ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿನ ಕನಕಾಚಲಪತಿ ದೇವಾಲಯ. ಕನಕಾಚಲಪತಿ ದೇವಾಲಯದ ಗರ್ಭಗುಡಿಯನ್ನು ಸಂಸ್ಥಾನದ ಮೂಲಪುರುಷ ಪರಸಪ್ಪ ಉಡುಚನಾಯಕ ನಿರ್ಮಿಸಿದ್ದು, ನವಾಬ ಉಡುಚನಾಯಕರು ಈ ದೇವಾಲಯದ ಮಧ್ಯರಂಗಮಂಟಪ ಕಟ್ಟಿಸಿದರೆ, ಕೆಲವಡಿ ಉಡುಚನಾಯಕ ದೇವಾಲಯದ ಗಾರೆ ಶಿಲ್ಪ ಸೇರಿದಂತೆ ಪ್ರಮುಖ ಮೂರು ಬೃಹತ್ ಮುಖ್ಯ ಗೋಪುರ ಹಾಗೂ ಪ್ರಾಂಗಣ ನಿರ್ಮಾಣ ಮಾಡಿದನು. ಕನಕಾಚಲಪತಿ ದೇವಾಲಯದಲ್ಲಿ ಸುಮಾರು ಒಂದೂಕಾಲು ಅಡಿ ಎತ್ತರದ ಶ್ರೀ ಲಕ್ಷ್ಮೀನರಸಿಂಹ ದೇವರು ಉದ್ಭವಿಸಿದ್ದು, ಸಾಲಿಗ್ರಾಮ ರೂಪದ ದೇವರಿಗೆ ಲೋಹದ ಕಿರೀಟವಿದೆ.

ಹೆಚ್ಚಿನ ಮಾಹಿತಿ

ವೆಂಕಟಾಪತಿ ಭಾವಿ

ಕನಕಗಿರಿಯಲ್ಲಿ ಹಲವಾರು ಪ್ರಸಿದ್ಧ ಬಾವಿಗಳಿವೆ. ಅದರಲ್ಲಿ ವೆಂಕಟಾಪತಿ ಬಾವಿಯು ಒಂದು. ಕನಕಗಿರಿಯಲ್ಲಿನ ಬಾವಿಗಳು ವಿಶಿಷ್ಟವೆನಿಸಿವೆ. ವೆಂಕಟಾಪತಿ ಬಾವಿಯು ಎಲ್ಲ ಬಾವಿಗಳಿಗಿಂತ ವಿಶೇಷತೆ ಹೊಂದಿದೆ.ಈ ಬಾವಿಯನ್ನು ಕನಕಗಿರಿಯ ದೊರೆ ಕನಕಯ್ಯ ಉಡಿಚನಾಯಕನ ತಮ್ಮನಾದ ವೆಂಕಟಪತಿ ಕಟ್ಟಿಸಿದನು ಈ ಕಾರಣದಿಂದಲೇ ಈ ಬಾವಿಯನ್ನು ವೆಂಕಟಾಪತಿ ಬಾವಿ ಎಂದು ಕರೆಯಲಾಗುತ್ತದೆ. ಇದು ಮಯೂರ ರಾಜನ ರಾಜಧಾನಿಯಂತೆ. ಭೀಮ ಮತ್ತು ಬನವಾಸಿ ನದಿಯ ಮಧ್ಯೆ ಇರೋದೇ ಕನಕಗಿರಿ ಅಂತ ಇತಿಹಾಸ ಹೇಳುತ್ತದೆ. ಕುಮಾರ ರಾಮನ ತಾಯಿ ಹರಿಯಾಳ ದೇವಿ ಸುಲ್ತಾನರ ವಿರುದ್ಧ ಹೋರಾಡಿದ ನೆಲೆವಿದು.

ಹೆಚ್ಚಿನ ಮಾಹಿತಿ

ಕನಕಗಿರಿ ಜಾತ್ರೆ

ಪ್ರತಿವರ್ಷ ಫಾಲ್ಗುಣ ಮಾಸದಲ್ಲಿ ಕನಕಾಚಲಪತಿಗೆ ತಿರುಪತಿಯ ವೆಂಕಟೇಶನಿಗೆ ನಡೆಯುವ ರೀತಿಯಲ್ಲೇ ವೈಭವದ ಬ್ರಹ್ಮರಥೋತ್ಸವ ನಡೆಯುತ್ತದೆ. ಕನಕಗಿರಿ ಜಾತ್ರೆಯು ಹೋಳಿ ಹುಣ್ಣಿಮೆಯಾದ 7 ದಿನಗಳ ನಂತರ ವಿಜ್ರಂಭಣೆಯಿಂದ ಜರುಗುತ್ತದೆ.

ಹೆಚ್ಚಿನ ಮಾಹಿತಿ

ಕನಕಗಿರಿ ಉತ್ಸವ

ಕನಕಗಿರಿ ಉತ್ಸವವು ಹಂಪಿ ಉತ್ಸವದ ಮಾದರಿಯಲ್ಲಿ ಮೊದಲಬಾರಿಗೆ 2010ರಲ್ಲಿ ಸಚಿವ ಶ್ರೀ ಶಿವರಾಜ ತಂಗಡಗಿಯವರ ವೈಯಕ್ತಿಕ ಆಸಕ್ತಿ ಹಾಗೂ ಬೆಂಬಲದೊಂದಿಗೆ, ಜಿಲ್ಲಾಡಳಿತದ ಜೊತೆಗುಡಿ ಅದ್ದೂರಿಯಾಗಿ ನಡೆಸಲಾಗಿತ್ತು. ತದನಂತರ 2013 ಮತ್ತು 2015 ರಲ್ಲಿ ನಡೆಸಲಾಯಿತು.

ಹೆಚ್ಚಿನ ಮಾಹಿತಿ

ಇತರ ದೇವಸ್ಥಾಗಳು ಮತ್ತು ಇತಿಹಾಸ

ಇಲ್ಲಿ 700 ದೇವಸ್ಥಾನಗಳು, 700 ಭಾವಿಗಳು, 700 ಗೋಲ್ಲರ ಮನೆಗಳಿದ್ದವೆಂದು ಇತಿಹಾಸದಿಂದ ತಿಳಿಯುತ್ತದೆ. ಇವು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಾಣಗೊಂಡ ದೇವಸ್ಥಾನಗಳಾಗಿವೆ, ಇವುಗಳನ್ನು ಗುಜ್ಜಲವಂಶದ ರಾಜನಾದ ಉಡಚಪ್ಪನಾಯಕನು ಕಟ್ಟಿಸಿದನು.

ಹೆಚ್ಚಿನ ಮಾಹಿತಿ