English   ಕನ್ನಡ

ವೆಂಕಟಾಪತಿ ಭಾವಿ


ಕನಕಗಿರಿಯಲ್ಲಿ ಮಧ್ಯಕಾಲೀನ ಕರ್ನಾಟಕದ ವಾಸ್ತುಶಿಲ್ಪದಂತೆ ನಿರ್ಮಿಸಲಾದ ವೆಂಕಟಪತಿ ಬಾವಿ ಅಥವಾ ಜಲಕ್ರೀಡಾ ಭವನವಿದೆ. ಈ ಬಾವಿಯು ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಕನಕಗಿರಿಯ ಹೊರವಲಯದಲ್ಲಿರುವ APMC ಆವರಣದೊಳಗೇ ನೆಲೆಗೊಂಡಿದೆ. 30 ಅಡಿ ಆಳದ ವೆಂಕಟಪತಿ ಬಾವಿಯನ್ನು 1586 ರಲ್ಲಿ ಕನಕಪ್ಪ ನಾಯಕನ ತಮ್ಮ ವೆಂಕಟಪ್ಪ ನಾಯಕ ನಿರ್ಮಿಸಿದ್ದು ಆತನ ಹೆಸರಿನಿಂದಲೇ ಕರೆಯಲಾಗುವದು. ಈ ಬಾವಿಯು ರಾಜ ಕುಟುಂಬದ ಸದಸ್ಯರಿಗೆ ಮಾತ್ರ ಮೀಸಲಾಗಿತ್ತು.

ಇಲ್ಲಿನ ವೆಂಕಟಪತಿ ಬಾವಿ ಹಂಪಿಯ ರಾಣಿಯರ ಸ್ನಾನದ ಗೃಹಕ್ಕಿಂತ ಚೆನ್ನಾಗಿದೆ. ಇಲ್ಲಿನ ಕೆಲವು ಕಂಬಗಳಲ್ಲಿ ಹಂಪೆಯ ವಿಜಯ ವಿಠ್ಠಲ ದೇವಾಲಯದ ಕಂಬಗಳ ರೀತಿಯಲ್ಲಿ ಸಂಗೀತ ಸ್ವರಗಳು ಕೇಳಿಬರುತ್ತವೆ. ಸುತ್ತಲೂ ಈಶ್ವರ ಪಾರ್ವತಿ ವೆಂಕಟರಮಣರ ಮೂರ್ತಿ ಇವೆ. ಇದು ನೆಲಮಟ್ಟಿದಿಂದ ಕೆಳಗೆ ಇರುವದರಿಂದ ಹತ್ತಿರ ಹೋಗುವವರೆಗೂ ಕಾಣುವದಿಲ್ಲ,ಇದನ್ನು ಕೆಳಗಿಳಿದ ಮೂರು ಬದಿಗಳಲ್ಲಿ ಒಂದು ಹಜಾರ ಸುತ್ತುವರೆದಿದೆ. ಇದು ಯಾತ್ರಿಗಳಿಗೆ ಒಂದು ದೇವಸ್ಥಾನ ಮತ್ತು ಆಶ್ರಯ ಹೊಂದಿದೆ. ಇಲ್ಲಿಯ ವಿಶೇಷವೆಂದರೆ ಸಿಂಹ ಶಿಲ್ಪದ ಬಾಯಲ್ಲಿ ಗುಂಡುಗಳೂ ಅಲುಗಾಡಲು ಬರುವಂತೆ ಕೆತ್ತಲಾಗಿದೆ.

ಇದನ್ನು ರಾಣಿಯರ ಸ್ನಾನ ಗೃಹವೆಂದು ಕರೆಯುತ್ತಿದ್ದರು. ಇದು ನಾಲ್ಕು ಪ್ರವೇಶ ಹಾದಿಗಳನ್ನು ಹೊಂದಿದೆ. ಮೂರು ಬಹುತೇಕ ರಹಸ್ಯ ಪ್ರವೇಶಗಳ ರೀತಿಯ ಸಂಕುಚಿತ ಹಾದಿಗಳು,ನಾಲ್ಕನೆಯ ಒಂದು ಸಾಮಾನ್ಯ ಮತ್ತು ವ್ಯಾಪಕ ಮುಕ್ತ ಮೆಟ್ಟಿಲಸಾಲು ಹೊಂದಿದೆ. ಎಡಭಾಗದಲ್ಲಿ, ಕಂಬಗಳ ಸಾಲು ಹಿಂದೆ ತೆರೆದ ಹಾಲ್ ಮತ್ತು ದೇವಾಲಯದ ಪ್ರವೇಶವಿದೆ. ಎರಡು ಅಂತಸ್ತಿನ ಬಾಲ್ಕನಿ ಕಟ್ಟಡ ಆಕರ್ಷಣಿಯವಾಗಿದೆ. ಈ ಬಾವಿ ಕನಕಗಿರಿ ಐತಿಹಾಸಿಕದಲ್ಲಿ ಅದ್ಬುತವಾಗಿದೆ.

ಕಮಾನಿನ ಗೋಡೆಗಳ ಮೇಲೆ ನೀರಿನ ಮಸುಕಾದ ಚಿಹ್ನೆಗಳನ್ನು ನೋಡಬಹುದು. ಭಾವಿಯ ಒಳಗಡೆ ಸ್ತಂಭದ ಭವನಗಳು ಇವೆ. ಕಂಬಗಳಲ್ಲಿ ಜ್ಯಾಮಿತಿಯ, ಹೂವಿನ, ಪ್ರಾಣಿಗಳ ಮತ್ತು ಸ್ವಸ್ತಿಕಾ ಚಿಹ್ನೆಗಳ ಒಳಗೊಂಡಿರುವ, ಸರಳ ಮತ್ತು ಸುಂದರವಾದ ಕೆತ್ತನೆಗಳಿವೆ.ಗೋಡೆಗಳ ಮೆಲೆ ಸರಳ ಹೂವಿನ ವಿನ್ಯಾಸಗಳು ಮತ್ತು ಗಿಳಿಗಳು ನಂತಹ ಹಕ್ಕಿಗಳಲ್ಲಿ ಅಲಂಕರಿಸಲಾಗಿದೆ.

ಮಾಹಿತಿ: ಗೂಗಲ್, ಅಲ್ಲಾಗಿರಿರಾಜ(ಲೇಖಕಕರು)